ರಾಪ್‌ಸಿಎಂಎಸ್ ಬಗ್ಗೆ
ಏಷ್ಯಾ ಖಂಡದಲ್ಲೇ ಅತೀ ದೊಡ್ಡ ರೈತರ ಸೊಸೈಟಿ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಆರ್‌ಎಪಿಸಿಎಂಎಸ್ (ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ) ಮಂಡ್ಯ ಜಿಲ್ಲೆ ಮತ್ತು ಇತರ ರಾಜ್ಯಗಳಲ್ಲಿ ರೈತರ ಕಲ್ಯಾಣಕ್ಕಾಗಿ ಸ್ಥಾಪಿತವಾದ ರಾಪ್‌ಸಿಎಂಎಸ್, 1948ರಲ್ಲಿ ಸ್ಥಾಪನೆಯಾದ ಸಹಕಾರ ಸಂಘವಾಗಿದೆ.ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರ ಕನಸಿನ ಕೂಸಾಗಿದ್ದ ಆರ್‌ಎಪಿಸಿಎಂಸಿ ರೈತರ ಪವಿತ್ರ ತಾಣ,ರೈತರು ಧರಿಸುವ ಪಟಾಪಟಿ ಚಡ್ಡಿಯಿಂದ ಕೃಷಿ ಚಟುವಟಿಕೆಗೆ ಬೇಕಾದ ಯಂತ್ರೋಪಕರಣ, ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ಮುಂತಾದ ಸರ್ವ ಸೇವೆಯೂ ಸೊಸೈಟಿಯಲ್ಲಿ ದೊರಯುತ್ತದೆ .ರೈತರು ಬೆಳೆದ ಉತ್ಪನ್ನಗಳ ಮಾರಾಟ, ಸಂಗ್ರಹ ವ್ಯವಸ್ಥೆಯನ್ನೂ ಸೊಸೈಟಿ ಆವರಣದಲ್ಲಿ ಕಲ್ಪಿಸಲಾಗಿದೆ .ಒಂದೇ ಸೂರಿನಡಿ ರೈತನ ಸಕಲ ಚಟುವಟಿಕೆಯನ್ನು ಒಂದೆಡೆ ಇದ್ದು . ಹೀಗಾಗಿ ಇದು ಏಷ್ಯಾದ ದೊಡ್ಡ ರೈತ ಸೊಸೈಟಿ ಎಂದೇ ಗುರುತಿಸಿಕೊಂಡಿದೆ. ರೈತರೇ ಷೇರುದಾರರಾಗಿದ್ದ ಸಂಸ್ಥೆಯು ರೈತರಿಂದ ರೈತರಿಗಾಗಿ ರೂಪಗೊಂಡಿತ್ತು.




ನಮ್ಮ ಉದ್ದೇಶ
ಶ್ರೇಷ್ಠ ಸಹಕಾರಿಗಳ ದೃಷ್ಟಿಯಿಂದ ರೈತರ ಅಭಿವೃದ್ಧಿಗೆ ಶ್ರದ್ಧೆ ಮತ್ತು ನಿಷ್ಠೆ ನೀಡುವ ಸಂಸ್ಥೆ.
ಗ್ಯಾಲರಿ
ರೈತರ ಅನುಕೂಲಕ್ಕಾಗಿ
ರೈತ ಯೋಜನೆಗಳು
ಮಂಡ್ಯ ಜಿಲ್ಲೆಯ ರೈತರಿಗಾಗಿ ನಮ್ಮ ಯೋಜನೆಗಳು ಮತ್ತು ಸೇವೆಗಳು.
ಸಹಕಾರ ಸಂಘ
1948ರಲ್ಲಿ ಸ್ಥಾಪಿತವಾದ ಈ ಸಹಕಾರ ಸಂಘವು ರೈತರ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತದೆ.
ಕೃಷಿ ಅಭಿವೃದ್ಧಿ
ಮಂಡ್ಯ ಜಿಲ್ಲೆಯ ಕೃಷಿಕರ ಬೆಳೆ, ಮಾರಾಟ ಮತ್ತು ಶ್ರೇಣೀಬದ್ಧ ಸೇವೆಗಳನ್ನು ಒದಗಿಸುತ್ತೇವೆ.